Mobirise

ಟೊಮೆಟೊ ಬೆಳೆ ಉತ್ಪಾದನೆ:

ಟೊಮೆಟೊ (ಸೊಲಾನಮ್ ಲೈಕೋಪರ್ಸಿಕಮ್ ಎಲ್.) ಬೆಳೆಯು ಆಲೂಗಡ್ಡೆಯ ನಂತರ ಭಾರತದಲ್ಲಿ ಬೆಳೆಯುವ ಎರಡನೆಯ ಪ್ರಮುಖ ತರಕಾರಿ ಬೆಳೆಯಾಗಿದೆ. ಇದನ್ನು ಭಾರತದಲ್ಲಿ 8 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಇದರ ಉತ್ಪಾದನೆ 22.4 ಮಿಲಿಯನ್ ಟನ್‌ಗಳು, ಸರಾಸರಿ ಉತ್ಪಾದಕತೆ ಹೆಕ್ಟೇರಿಗೆ ಸುಮಾರು 28 ಟನ್, ಭಾರತದಲ್ಲಿ ಆಂಧ್ರಪ್ರದೇಶ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಛತ್ತೀಸ್‌ಗಡ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಬಿಹಾರ ಇವು ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. ಇದು ಅನ್ನಾಂಗ ಎಬಿಸಿ ಮತ್ತು ಆಂಟಿಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿದೆ. ಟೊಮೆಟೊಗಳನ್ನು ಸಲಾಡ್‌ ತಯಾರಿಕೆಯಲ್ಲಿ, ಮೇಲೋಗರ (ಸಾಂಬಾರು) ತಯಾರಿಕೆಯಲ್ಲಿ ಹಾಗೂ ಬೇಯಿಸಿದ ತರಕಾರಿಯಾಗಿ ಬಳಸಲ್ಪಡುತ್ತದೆ. ಟೊಮೆಟೊಗಳನ್ನು ಪ್ಯೂರೀ, ಕೆಚಪ್, ಸಾಸ್, ಚಟ್ನ ಮತ್ತು ಸಂಸ್ಕರಿಸಿದ ರೂಪಗಳಲ್ಲಿ ಸೇವಿಸಲಾಗುತ್ತದೆ.

ಮಣ್ಣು ಮತ್ತು ಹವಾಗುಣ/ಋತು: : ನೀರು ಚೆನ್ನಾಗಿ ಬಸಿದು ಹೋಗುವ ಗೋಡುಮಣ್ಣು ಮತ್ತು ಸಮರ್ಪಕ ಗಾಳಿಯಾಡುವ ಮಣ್ಣು ಟೊಮೆಟೊ ಕೃಷಿಗೆ ಸೂಕ್ತ. ಮಣ್ಣಿನ ಗರಿಷ್ಠ ರಸಸಾರ 6.0 ರಿಂದ 7,0 ಇರಬೇಕು, ಬೆಳೆಯಲ್ಲಿ ನೀರು ನಿಲ್ಲಿಸಿದರೆ ಬ್ಯಾಕ್ಟಿರಿಯ ಸೊರಗು ರೋಗದ ಪ್ರಮಾಣ ಜಾಸ್ತಿಯಾಗುತ್ತದೆ. ಮಣ್ಣಿಂದ ಹರಡುವಂತಹ ರೋಗಗಳನ್ನು ತಡೆಗಟ್ಟಲು ಏಕದಳ ಬೆಳೆಗಳೊಂದಿಗೆ ಇತರ ಬೆಳೆಗಳ ಸರದಿ ಅಗತ್ಯವಿರುತ್ತದೆ. ಇದು ಬೆಚ್ಚಗಿನ ಋತು ಬಯಸುವ ಬೆಳೆಯಾಗಿದ್ದು, 90 ರಿಂದ 150 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಬಿಸಿಲಿರುವಂತಹ ವಾತಾವರಣವು ಕಾಯಿಗಳು ಚೆನ್ನಾಗಿ ಹಣ್ಣಾಗಲು ಹಾಗೂ ಒಳ್ಳೆಯ ಬಣ್ಣ, ಗುಣಮಟ್ಟ ಮತ್ತು ಅಧಿಕ ಇಳುವರಿಗೆ ಕಾರಣವಾಗಿದೆ. ಹಗಲಿನ ತಾಪಮಾನ 28° ಸೆಲ್ಸಿಯಸ್ ಮತ್ತು ರಾತ್ರಿಯ ತಾಪಮಾನ 18 ಸೆಲ್ಸಿಯಸ್ ಬೆಳವಣಿಗೆಗೆ ಅನುಕೂಲಕರವಾಗಿದೆ. ಮಳೆಯು ಎಲೆ ಮತ್ತು ಹಣ್ಣು ಕೊಳೆಯುವ ರೋಗಗಳಿಗೆ ಕಾರಣವಾಗುತ್ತದೆ. ತಾಪಮಾನ ಅಧಿಕವಾದಲ್ಲಿ ಕೀಟಗಳನ್ನು ಹರಡುವ ವಾಹಕಗಳ ಪ್ರಮಾಣ ಜಾಸ್ತಿಯಾಗುತ್ತದೆ. ಇದರಿಂದ ವೈರಸ್‌ಗಳಿಂದ ಉಂಟಾಗುವ ರೋಗಗಳಾದ ಜಿಬಿಎನ್‌ ಮತ್ತು ಟಿಓಎಲ್‌ಸಿವಿಗಳ ಪ್ರಮಾಣ ಹೆಚ್ಚಾಗುತ್ತದೆ. ದೇಶದ ದಕ್ಷಿಣ ಉಷ್ಣವಲಯದಲ್ಲಿ, ಮಧ್ಯಮ ಹವಾಮಾನ ಇರುವಲ್ಲೆಲ್ಲಾ ಟೊಮೆಟೊ ವರ್ಷವಿಡೀ ಬೆಳೆಯಲಾಗುತ್ತದೆ. ಆದಾಗ್ಯೂ ಆಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ನೆಡುವುದರಿಂದ ಉತ್ತಮ ಗುಣಮಟ್ಟ ಮತ್ತು ಇಳುವರಿಯನ್ನು ಪಡೆಯಬಹುದು.

Cultural Practices

ಬೆಳೆ ಸಾಮರ್ಥ್ಯಕ್ಕಾಗಿ ಉತ್ತಮ ಭೂಮಿ ಸಿದ್ಧತೆ ಅತ್ಯಗತ್ಯ. ಇದನ್ನು ಹೆಂಟೆ ಹೊಡೆದು 30 ರಿಂದ 45 ಸೆಂ.ಮೀ ಆಳಕ್ಕೆ ರೊಟೋವೇಟರ್‌ನಿಂದ ಉಳುಮೆ ಮಾಡುವ ಮೂಲಕ ಮಾಡಬಹುದು. ಭೂಮಿ ಸಿದ್ಧಪಡಿಸುವ ಕೊನೆಯ ಹಂತದ ಮುನ್ನ ಒಂದು ಹೆಕ್ಟೇರಿಗೆ ಚೆನ್ನಾಗಿ ಕೊಳೆತ ಜೈವಿಕ ಜೀವಾಣು ಸಮೃದ್ಧಿಯಾದ 25 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಭೂಮಿ ಚೆನ್ನಾಗಿ ಹದ ಮಾಡಿದ ನಂತರ ಮಡಿಗಳಾಗಿ ವಿಂಗಡಿಸಿ, 80 ಸೆಂ.ಮೀ ಎತ್ತರದ ಮಡಿಗಳನ್ನು ಮಾಡಿ 40 ಸೆಂ.ಮೀ ಹುಗಳನ್ನು ಸಿದ್ಧಪಡಿಸಬೇಕು. ಈ ವಿಶಾಲವಾದ ಸಸಿಮಡಿ ಪದ್ಧತಿಯು ಹನಿ ನೀರಾವರಿ, ಪರ್ಟಿಗೇಷನ್, ಫಾಲಿಥೀನ್ ಹೊದಿಕೆ ಮುಂತಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸುಲಭವಾಗುತ್ತದೆ.

ಟ್ರೈಕೋಡರ್ಮಾದಂತಹ ಉಪಯುಕ್ತ ಶಿಲೀಂಧ್ರಗಳನ್ನು ಒಂದು ಟನ್ ಕೊಟ್ಟಿಗೆ ಗೊಬ್ಬರಕ್ಕೆ ಒಂದು ಕೆ.ಜಿ ಮಿಶ್ರಣಮಾಡಿ ಸರಿಯಾದ ತೇವಾಂಶವನ್ನು ಒದಗಿಸಿ, 15 ದಿನಗಳವರೆಗೆ ವೃದ್ಧಿಸಲು ಬಿಡಬೇಕು. ಇದೇ ರೀತಿ ಅಜೋಸ್ಪಿರಿಲ್ಲಮ್/ಅಜಟೋಬ್ಯಾಕ್ಟರ್ ಮತ್ತು ಪಿಎಸ್‌ಬಿ ಜೀವಾಣುಗಳನ್ನು ಕೂಡ ಕೊಟ್ಟಿಗೆ ಗೊಬ್ಬರದ ಜೊತೆಗೆ ಮಿಶ್ರಣ ಮಾಡುತ್ತಿರಬೇಕು. ಭೂಮಿ ಸಿದ್ಧತೆಯ ಕೊನೆಯ ಹಂತದಲ್ಲಿ ಜೀವಾಣು ಮಿಶ್ರಿತ ಕೊಟ್ಟಿಗೆ ಗೊಬ್ಬರವನ್ನು ಉಳಿದಂತಹ ಕೊಟ್ಟಿಗೆ ಗೊಬ್ಬರದ ಜೊತೆಗೆ ಮಿಶ್ರಮಾಡಿ ಮಣ್ಣಿಗೆ ಸೇರಿಸಬೇಕು. ನರ್ಸರಿ ತಯಾರಿಕೆ ಸಂದರ್ಭದಲ್ಲಿ ಬಳಸುವ 1 ಟನ್‌ ಮಾಧ್ಯಮಕ್ಕೆ 1 ಕೆ.ಜೆ. ಜೈವಿಕ ಸೂಕ್ಷ್ಮಾಣು ಮಿಶ್ರಣ (ಐಐಹೆಚ್ಆರ್ ನಲ್ಲಿ ದಪಡಿಸಿದ ಎಎಂಸಿ) ವನ್ನು ಬೆರೆಸಬೇಕು.

ಸಂರಕ್ಷಿತ ನೆರಳುಪರದೆ ಮನೆಯಲ್ಲಿ ಬಳಸುವ ಮೊಳಕ ತಟ್ಟೆ (ಮೋಟೆ) ಗಳಲ್ಲಿ ತೆಂಗಿನನಾರು ಮಾಧ್ಯಮವಾಗಿ ಉಪಯೋಗಿಸಿ ಸಸಿಗಳನ್ನು ಬೆಳೆಸುವುದು ಉತ್ತಮ ಕ್ರಮವಾಗಿದೆ. ಇದು ವೈರಸ್ ರೋಗಮುಕ್ತ ಮತ್ತು ಒಳ್ಳೆಯ ಗುಣಮಟ್ಟದ ಸಸಿಗಳನ್ನು ಒದಗಿಸುತ್ತದೆ. ಅನೇಕ ಉದ್ಯಮಶೀಲ ರೈತರು ತರಕಾರಿ ಬೆಳೆಯುವಂತಹ ಪ್ರದೇಶಗಳಲ್ಲಿ ನರ್ಸರಿ ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ. ರೈತರು ನೇರವಾಗಿ ಈ ನರ್ಸರಿಗಳಿಂದ ಸಸಿಗಳನ್ನು ಖರೀದಿಸಬಹುದು. ವೈಯಕ್ತಿಕವಾಗಿಯೂ ರೈತರು ಈ ಸುಧಾರಿತ ವಿಧಾನವನ್ನು ಅನುಸರಿಸಿ ಸ ತಯಾರಿಸಬಹುದು. ನೈಲಾನ್ ಬಟ್ಟೆಯಿಂದ ತಯಾರು ಮಾಡಿದ 40 ತೂತುಗಳುಳ್ಳ ಜಾಲರಿ, ಉಗಿ ಕ್ರಿಮಿನಾಶಕಗೊಳಿಸಿದ ತೆಂಗಿನ ನಾರು (ಕೋಕೋಪೀಟ್) ಪುಡಿ, 98 ಕೋಶಗಳುಳ್ಳ ಮೊಳಕೆ ತಟ್ಟೆಗಳನ್ನು ರೈತರು ಸಂಗ್ರಹಿಸಬೇಕು, 10,000 ಮೊಳಕೆಗಳನ್ನು ಉತ್ಪಾದಿಸಲು 7.5 ಮೀ ಉದ್ದ, 3.4 ಮೀ ಅಗಲ ಮತ್ತು 2.4 ಮೀ ಎತ್ತರವಿರುವಂತಹ ತೂತುಗಳಿಂದ ಕೂಡಿದ ಪಂಜರ ಬೇಕಾಗುತ್ತದೆ. ಸಸಿಗಳನ್ನು ಭೂಮಿಯಲ್ಲಿ ನೆಡುವ ಮುನ್ನ ಸಸಿಗಳ ತಟ್ಟೆಗಳಿಗೆ ಸೂಕ್ತ ಕೀಟನಾಶಕವನ್ನು ಸಿಂಪಡಣೆ ಮಾಡಬೇಕು. ಇದೇ ರೀತಿ ಶಿಲೀಂಧ್ರನಾಶಕಗಳಾದ ಸಿಓಸಿ ಒಂದು ಲೀಟರ್ ನೀರಿನಲ್ಲಿ 3 ಗ್ರಾಂ ನಂತೆ ಮಿಶ್ರಣ ಮಾಡಿ ನಾಟಿ ಮಾಡಿದ ತಕ್ಷಣ ಸಸಿಗಳ ಬುಡಗಳಿಗೆ ಸಿಂಪಡಣೆ ಮಾಡುವುದರಿಂದ ಮಣ್ಣಿಂದ ಹರಡುವ ರೋಗಗಳನ್ನು ತಡೆಗಟ್ಟಬಹುದು. ಪ್ರೋಟೇ ವಿಧಾನದಲ್ಲಿ 120 ಸೆಂ.ಮೀ X 45 ಸೆಂ.ಮೀ ಅಂತರದಲ್ಲಿ ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಸಸಿಗಳನ್ನು ಬೆಳೆಯಲು 75 ಗ್ರಾಂ ಟೊಮೆಟೊ ಬೀಜ ಬೇಕಾಗುತ್ತದೆ ಒಂದು ಹೆಕ್ಟೇರಿಗೆ ಸುಮಾರು 18,000 ಗಿಡಗಳು), ಎತ್ತರದ ಮಡಿ ವಿಧಾನದಲ್ಲಿ ಒಂದು ಹೆಕ್ಟೇರಿಗೆ ಸಂಕರಣ ತಳಿಗಳಾದಲ್ಲಿ 100 ರಿಂದ 125 ಗ್ರಾಂ ಬೀಜ ಮತ್ತು ತೆರೆದ ಪರಾಗಸ್ಪರ್ಶವಾಗುವ ತಳಿಗಳಾದಲ್ಲಿ 200 ರಿಂದ 250 ಗ್ರಾಂ ಬೇಕಾಗುತ್ತದೆ. ಬೀಜವನ್ನು ಬಿತ್ತಿದ 20 ರಿಂದ 25 ದಿನಗಳಲ್ಲಿ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.

25 ದಿನಗಳ ದೃಢ ಮತ್ತು ಸ್ಕೂಲವಾದ ಸಸಿಗಳನ್ನು ಮುಖ್ಯ ಭೂಮಿಯಲ್ಲಿ ಎತ್ತರದ ಮಡಿಗಳನ್ನು ಸಿದ್ಧಪಡಿಸಿ ನೆಡಬೇಕು. ನಾಟಿ ಮಾಡಿದ ಕೂಡಲೇ ಅವು ಸಾಯುವುದನ್ನು ತಡೆಯಲು ಒಂದು ವಾರದವರೆಗೆ ನೀರಾವರಿ ಒದಗಿಸಬೇಕು. ಸಾಮಾನ್ಯವಾಗಿ ನಾಟಿ ವಿಧಾನದಲ್ಲಿ, ಸಂಕರಣ ತಳಿಗಳನ್ನು 100-120 ಸೆಂ.ಮೀ ಅಂತರದಲ್ಲಿ ಹರಿಗಳನ್ನು ತೆಗೆದು, ಅದರಲ್ಲಿ ಪ್ರತಿ 60 ರಿಂದ 75 ಸೆಂ.ಮೀ ಅಂತರಕ್ಕೆ ಒಂದು ಸಸಿಯನ್ನು ನಾಟಿ ಮಾಡಬೇಕು. ಸಾಮಾನ್ಯ ತಳಿಗಳನ್ನು ನಾಟಿ ಮಾಡುವಾಗ ಎರಡು ಸಾಲುಗಳ ಮಧ್ಯೆ 100 ಸೆಂ.ಮೀ ಹಾಗೂ ಎರಡು ಸಸಿಗಳ ಮಧ್ಯೆ 50 ಸೆಂ.ಮೀ ಅಂತರವಿರಬೇಕು.

ಹನಿ ನೀರಾವರಿ ಮತ್ತು ರಸಾವರಿ ಅಳವಡಿಸಿಕೊಳ್ಳುವುದು ಟೊಮೆಟೊ ಕೃಷಿಯಲ್ಲಿ ಹೆಚ್ಚು ಪ್ರಯೋಜನಕಾರಿ. ನಿಯಂತ್ರಣ ಘಟಕದಲ್ಲಿ ಪಂಪ್, ಡಿಸ್ಕ್‌ಫಿಲ್ಟರ್‌, ರಸಗೊಬ್ಬರಗಳನ್ನು ಒಳಹೋಗಿಸುವ ಸಾಧನ ಅಥವಾ ಟ್ಯಾಂಕ್, ಪಂಚ್, ಒತ್ತಡದ ಮಾಪಕ, ವಾಯು ಬಿಡುಗಡೆ ಕಪಾಟ ಇವೆಲ್ಲವನ್ನೂ ಹೊಂದಿರಬೇಕು. ಇನ್‌ಲೈನ್‌ ಡ್ರಿಪ್ ಪಾರ್ಶ್ವಗಳನ್ನು ಪಿವಿಸಿ ಪೈಪ್‌ನಿಂದ 1.2 ಮೀಟರ್ ದೂರದಲ್ಲಿ ಹೊರತೆಗೆಯಲಾಗುತ್ತದೆ. ಗಂಟೆಗೆ 3 ರಿಂದ 4 ಲೀಟರ್‌ ನೀರನ್ನು ಹೊರಹೊಮ್ಮಿಸುವ ಸಾಮರ್ಥ್ಯವನ್ನು ಹೊಂದಿದ ಇನ್ ಡ್ರಿಪ್ ಪಾರ್ಶ್ವಗಳ ನಡುವೆ ಸೆಂ.ಮೀ ಅಂತರವಿರಬೇಕು. ಬೆಳೆ ಹಂತದ ಆಧಾರದ ಮೇಲೆ ದೈನಂದಿನ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಬೇಕು. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೊದಲೇ ನೀರಿನ ಗುಣಮಟ್ಟದ ನಿಯಂತ್ರಕಗಳಾದ ನೀರಿನ ಇಸಿ ಪರೀಕ್ಷಿಸಬೇಕು. 

ಟೊಮೆಟೊ ಸಂಕರಣ ತಳಿಗಳಿಗೆ ಒಂದು ಹೆಕ್ಟೇರಿಗೆ 180:120:150 ಕೆ.ಜಿ.ಯಷ್ಟು ಎನ್.ಪಿ.ಕೆ ರಸಗೊಬ್ಬರಗಳನ್ನು ಶಿಫಾರಸು ಮಾಡಲಾಗಿದೆ. ರಸಗೊಬ್ಬರ ವೇಳಾಪಟ್ಟಿಯಲ್ಲಿ, ಗೊಬ್ಬರಗಳ ಮೇಲಿನ ವೆಚ್ಚವನ್ನು ಉಳಿಸಲು, ಪೂರ್ತಿ ಪ್ರಮಾಣದ ರಂಜಕವನ್ನು ಸಿಂಗಲ್ ಸೂಪರ್ ಪಾಸ್ಟೇಟ್‌ನ ರೂಪದಲ್ಲಿ ಗಿಡಗಳನ್ನು ನೆಡುವಾಗ ಮಣ್ಣಿನಲ್ಲಿ ಬೆರೆಸಬೇಕು. ಸಾರಜನಕವನ್ನು ಯೂರಿಯಾ ರೂಪದಲ್ಲಿ ಹಾಗೂ ಪೊಟ್ಯಾಪ್‌ ಅನ್ನು ನೀರಿನಲ್ಲಿ ಕರಗುವಂತಹ ಪೊಟ್ಯಾಷಿಯಮ್ ನೈಟೇಟ್‌ನ ರೂಪದಲ್ಲಿ ಗಿಡಗಳಿಗೆ ಒದಗಿಸಬೇಕು. ರಸಗೊಬ್ಬರಗಳನ್ನು ಸಾಗಿಸಲು ವೆಂಚುರಿ ಅಥವಾ ರಸಗೊಬ್ಬರದ ಟ್ಯಾಂಕ್ ಅಥವಾ ರಸಗೊಬ್ಬರದ ಇಂಜೆಕ್ಟರ್‌ ಅಳವಡಿಸಬೇಕು. ನಾಟಿ ಮಾಡಿದ 10 ದಿನಗಳ ನಂತರ ನೀರಿನ ಮೂಲಕ ಹರಿಸಬೇಕು. ಇದನ್ನು ಪ್ರತಿದಿನ ಅಥವಾ ವಾರಕ್ಕೆ ಎರಡು ಬಾರಿ ಮುಂದುವರೆಸಬಹುದು. ನೀರಿನ ಮೂಲಕ ಹರಿಸುವುದನ್ನು ಕೊಯ್ದು ಮಾಡುವ ಮೂರು ವಾರಗಳ ಮುಂಚೆಯೇ ನಿಲ್ಲಿಸಬೇಕು.
ಸಸಿಗಳನ್ನು ನೆಡುವ ಮುನ್ನವೇ ಸಂಕರಣ ತಳಿಗಳಿಗೆ ಶಿಫಾರಸು ಮಾಡಿರುವ ಗೊಬ್ಬರದ 1/3 ನೇ ಭಾಗ ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು 1/3 ಭಾಗ ಪೊಟ್ಯಾಷ್ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಸಸಿಗಳನ್ನು ನೆಟ್ಟ ನಾಲ್ಕನೆಯ ವಾರದ ನಂತರ 1/3 ಭಾಗ ಸಾರಜನಕ ಮತ್ತು 1/3 ಭಾಗ ಮೊಟ್ಯಾಷ್ ಮೇಲು ಗೊಬ್ಬರವಾಗಿ ಕೊಡಬೇಕು. ಉಳಿದ 1/3 ಭಾಗ ಸಾರಜನಕ ಮತ್ತು 1/3 ಭಾಗ ಮೊಟ್ಯಾಷ್ ಗಿಡಗಳನ್ನು ನೆಟ್ಟಿ 8-9 ವಾರದಲ್ಲಿ ಮೇಲುಗೊಬ್ಬರವಾಗಿ ಕೊಡಬೇಕು. ಮುಕ್ತ ಪರಾಗಸ್ಪರ್ಶದ ತಳಿಗಳಿಗೆ ಪ್ರತಿ ಹೆಕ್ಟೇರಿಗೆ 120:00:00 ಕೆ.ಜಿ. ಎನ್‌ಪಿಕೆ ಒದಗಿಸಬೇಕು. ಅರ್ಧ ಭಾಗದಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಅನ್ನು ಸಸಿಗಳನ್ನು ನೆಡುವ ಮುಂಚೆ ಮೂಲವಾಗಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು ಮತ್ತು ಉಳಿದ ಅರ್ಧದಷ್ಟು ಸಾರಜನಕವನ್ನು ಸಸಿಗಳನ್ನು ನೆಟ್ಟ 4 ವಾರಗಳ ನಂತರ ಒದಗಿಸಬೇಕು.

ಟೊಮೆಟೊ ಗಿಡಗಳಿಗೆ ಬಿದಿರು, ಸರ್ವೆ ಮರ ಅಥವಾ ನೀಲಗಿರಿ ಕೋಲುಗಳು ಹಾಗೂ ಜಿಐ ತಂತಿಯಿಂದ ಕಟ್ಟಿ ಆಧಾರ ಒದಗಿಸಬೇಕು. ಇದರಿಂದ ಸಸಿಗಳಿಗೆ ರಕ್ಷಣೆ ದೊರೆಯುವುದರ ಜೊತೆಗೆ ಕೊಯ್ದು ಮಾಡಲು ಸುಲಭವಾಗಿ ಹಣ್ಣಿನ ಇಳುವರಿ ಹಾಗೂ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಟೊಮೆಟೊ ಗಿಡಗಳನ್ನು ನೆಟ್ಟ 4 ವಾರಗಳ ನಂತರ ಬೋದು ಮತ್ತು ಹರಿಗಳ ವಿಧಾನದಲ್ಲಿ ಸಾಲಿಗೆ ಮಣ್ಣು ಏರುಹಾಕಿ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು. ನೆಟ್ಟ 45 ದಿನಗಳವರೆಗೆ ಭೂಮಿಯನ್ನು ಕಳೆಮುಕ್ತವಾಗಿರಿಸಬೇಕು.

ಬೆಳ್ಳಿ ಮತ್ತು ಕಪ್ಪು ಬಣ್ಣದ ಮೇಲೆಯೊಂದಿಗೆ 30 ಮೈಕ್ರಾನ್ ದಪ್ಪದ ಪಾಲಿಥೀನ್ ಹೊದಿಕೆಯನ್ನು ಬಳಸಬೇಕು. ಸಾಲುಗಳಿಗೆ 80 ಸೆಂ.ಮೀ ಅಗಲ, 90 ಮೀ ಉದ್ದದ ಪಾಲಿಥೀನ್ ಹೊದಿಕೆಯ ಅಂಚುಗಳನ್ನು ಬಿಗಿಯಾಗಿ ಎಳೆದು ಮಣ್ಣಿನಲ್ಲಿ ಹೂತಿರಬೇಕು, 

ಎಲೆಗಳ ಕೊರತೆಯ ಲಕ್ಷಣದ ಆಧಾರದ ಮೇಲೆ, ಗಿಡಗಳನ್ನು ನೆಟ್ಟ 45 ದಿನಗಳ ನಂತರ ಐಐಹೆಚ್ಆರ್‌ನಲ್ಲಿ ಸಿದ್ಧಪಡಿಸಲಾದ 'ತರಕಾರಿ ಸ್ಪೆಷಲ್' ಲಘು ಪೋಷಕಾಂಶಗಳ ಮಿಶ್ರಣ (3-5 ಗ್ರಾಂ/ಲಿ) 10 ರಿಂದ 15 ದಿನಗಳಿಗೊಮ್ಮೆ 2 ರಿಂದ 3 ಬಾರಿ ಸಿಂಪಡಣೆ ಮಾಡಬೇಕು. ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಂಡಾಗ, ಕ್ಯಾಲ್ಸಿಯಂನ ಕೀಲೇಟ್ ರೂಪದಲ್ಲಿ ಪೌಷ್ಟಿಕಾಂಶವಾಗಿ ಎಲೆಗಳಿಗೆ ನೀಡಬೇಕಾಗುತ್ತದೆ. 19-19-19, ಲಘು ಪೋಷಕಾಂಶ, ಪೊಟ್ಯಾಷಿಯಮ್ ನೈಟೇಟ್ ಅಥವಾ ಪೊಟಾಷಿಯಮ್ ಸಲ್ವೇಟ್ (ಗ್ರಾಂ/ಲೀ) ಗಳನ್ನು ಹಣ್ಣಿನ ಬೆಳವಣಿಗೆ ಹಂತದಲ್ಲಿ ಸಿಂಪಡಣೆ ಮಾಡಿದರೆ, ಹಣ್ಣುಗಳ ಗಾತ್ರ, ಬಣ್ಣ ಮತ್ತು ಗುಣಮಟ್ಟವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. 

ಸಸಿಗಳನ್ನು ನೆಟ್ಟಿ 60 ರಿಂದ 15 ದಿನಗಳಲ್ಲಿ ಬೆಳೆ ಕೊಯ್ದು ಮಾಡಲು ಸಿದ್ಧವಾಗುತ್ತದೆ. ಕಾಯಿಗಳನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಗುಲಾಬಿ ಬಣ್ಣಕ್ಕೆ ತಿರುಗುವ ಸಂದರ್ಭದಲ್ಲಿ 3 ರಿಂದ 4 ದಿನಗಳ ಅಂತರದಲ್ಲಿ ಕೊಯ್ದು ಮಾಡಬೇಕು. ದಿನದ ತಂಪಾದ ಅವಧಿಯಲ್ಲಿ ಕೊಯ್ದು ಮಾಡಿ, ನೆರಳಿನಲ್ಲಿ ಶೇಖರಣೆ ಮಾಡಬೇಕು. ನಂತರ ಅದನ್ನು ಮರದ ಪೆಟ್ಟಿಗೆ ಅಥವಾ ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ಅಥವಾ ಬಿದಿರು ಬುಟ್ಟಿಗಳಲ್ಲಿ ತುಂಬಬೇಕು.

ಪ್ರತಿ ಹೆಕ್ಟೇರಿಗೆ ಸುಧಾರಿತ ತಳಿಗಳಲ್ಲಿ 35-40 ಹಣ್ಣುಗಳನ್ನು ಪಡೆಯಬಹುದು. ಸಂಕರಣ ತಳಿಗಳಲ್ಲಿ 70-80 ಟನ್‌ವರೆಗೂ ಪಡೆಯಬಹುದು...

Created with Mobirise ‌

HTML5 Page Creator