Mobirise

ಹಣ್ಣು ಕೊರೆಯುವ ಹುಳು

ಕೊರಕ ಬಾಧೆಗೊಳಗಾದ ಹಣ್ಣುಗಳನ್ನು ಕೊರಕ ಕೀಟದ ಜೊತೆಯಲ್ಲಿ ಸಂಗ್ರಹಿಸಿ ನಾಶಪಡಿಸಿ.
• ನಾಟಿ ಮಾಡಿದ ನಂತರ 28, 35 ಮತ್ತು 42 ದಿನಗಳಲ್ಲಿ, ಸಾಯಂಕಾಲದ ಸಮಯದಲ್ಲಿ 200 ಲೀಟರ್ ನೀರಿಗೆ HaNPV @ 100 LE/ ಎಕರೆಗೆ ಬೆರೆಸಿ ಸಿಂಪಡಿಸಿ. ಸಿಂಪಡಿಸುವ ಮೊದಲು 1% ಬೆಲ್ಲ ಮತ್ತು 0.5 ಮಿಲಿ/ಲೀ ಸ್ಟಿಕ್ಕರ್ ಮಿಶ್ರಣ ಮಾಡಿ.
ಅಥವಾ
• ಇಂಡೋಕ್ಸಾಕಾರ್ಬ್ 14.5 SC (1.0 ml/l) ಅಥವಾ ಥಿಯೋಡಿಕಾರ್ಬ್ 75WP (1.0 g/l) ಅಥವಾ ಎನಾಮೆಕ್ಟಿನ್ ಬೆಂಜೊಯೇಟ್ 5% SG (0.4 g/l) ಅಥವಾ ಕೇಂದ್ರೀಯ ಕೀಟನಾಶಕ ಮಂಡಳಿಯಲ್ಲಿ ಟೊಮೆಟೊ ಹಣ್ಣು ಕೊರೆಯುವ ಹುಳುಗೆ ನೋಂದಾಯಿಸಲಾದ ಯಾವುದೇ ಪರಿಣಾಮಕಾರಿ ಕೀಟನಾಶಕ ಅಥವಾ ಸಸ್ಯಶಾಸ್ತ್ರೀಯ ಅಥವಾ ಜೈವಿಕ ಕೀಟನಾಶಕ ಬಳಸಬಹುದು.

Mobirise

ಎಲೆ ಸುರಂಗದ ಕೀಟ (ನಾಗಮುದ್ರೆ ಕೀಟ)

ನಾಟಿ ಮಾಡುವ ಸಮಯದಲ್ಲಿ ಲೀಫ್ ಮೈನರ್ ಸೋಂಕಿತ ಎಲೆಗಳನ್ನು ತೆಗೆದುಹಾಕಿ.
ಸಸ್ಯಗಳು ಸುಮಾರು 4-5 ಅಡಿ ಎತ್ತರವನ್ನು ಪಡೆದ ನಂತರ, ಸೋಂಕಿತ ಎಲೆಗಳನ್ನು ಕೆಳಗಿನಿಂದ 6-8 ಇಂಚುಗಳಷ್ಟು ಎತ್ತರಕ್ಕೆ ತೆಗೆದುಹಾಕಲು ಸಲಹೆ ನೀಡಲಾಗುತ್ತದೆ.
• ಯಾವುದೇ ಸಂಶ್ಲೇಷಿತ ಕೀಟನಾಶಕಗಳ ಸಿಂಪಡಣೆಯನ್ನು ತಪ್ಪಿಸಿ ಏಕೆಂದರೆ ಇದು ಪ್ರತಿರೋಧದ ಬೆಳವಣಿಗೆಯಿಂದಾಗಿ ಎಲೆ ಸುರಂಗದ ಕೀಟ ಆಕ್ರಮಣವನ್ನು ಇನ್ನು ಹೆಚ್ಚಿಸಬಹುದು. ಎಲೆ ಸುರಂಗದ ಹುಳುಗೆ ಯಾವುದೇ ಸಿಂಪಡಣೆಯನ್ನು ನೀಡಬೇಕಾದರೆ, ಬೇವಿನ ಉತ್ಪನ್ನಗಳನ್ನು ಮಾತ್ರ ಸಿಂಪಡಿಸಿ.

Mobirise

ಬಿಳಿನೊಣ

ಬಿತ್ತನೆ ಮಾಡಿದ 15 ದಿನಗಳ ನಂತರ ನರ್ಸರಿಯಲ್ಲಿ ಇಮಿಡಾಕ್ಲೋಪ್ರಿಡ್ 17.8 ಎಸ್‌ಎಲ್ (0.3 ಮಿಲಿ/ಲೀ) ಅಥವಾ ಥಯಾಮೆಥಾಕ್ಸಮ್ 25 WP (0.3 ಗ್ರಾಂ/ಲೀ) ಅಥವಾ ಫಿಪ್ರೊನಿಲ್ (1.0 ಮಿಲಿ/ಲೀ) ಸಿಂಪಡಿಸಿ ಮತ್ತು ನಾಟಿ ಮಾಡುವ ಒಂದು ದಿನ ಮೊದಲು ಟ್ರೇಗಳಲ್ಲಿನ ಸಸಿಗಳನ್ನು ಇಮಿಡಾಕ್ಲೋಪ್ರಿಡ್ 17.8 ಎಸ್‌ಎಲ್ (0.3 ಮಿಲಿ/ಲೀ) ಅಥವಾ ಥಯಾಮೆಥಾಕ್ಸಮ್ 25 WP (0.3 g/l) ನಿಂದ ಅದ್ದುವುದು.

Mobirise

ಕೆಂಪು ಜೇಡ ನುಸಿ

PNSPE (4%) ಅಥವಾ ಬೇವು/ ಪೊಂಗಮಿಯಾ ಸೋಪ್ (8-10 g/l) ಅಥವಾ ಡೈಕೋಫೋಲ್ 18.5 EC (2 ml/l) ಅಥವಾ ಡೈನೋಕ್ಯಾಪ್ (1.0 ml/l) ಅಥವಾ ಡಯೋಫೆಂಥಿಯಮ್ (2.0 ml/l) ಅಥವಾ ಅಬಾಮೆಕ್ಟಿನ್ 1.9 EC ( 0.5 ಮಿಲಿ/ಲೀ) ಅಥವಾ ಫೆನಾಜಾಕ್ವಿನ್ 10% ಇಸಿ (1.0 ಮಿಲಿ/ಲೀ) ಅಥವಾ ಸ್ಪಿರೋಮೆಸಿಫೆನ್ 22.9% w/w (1.0 ಮಿಲಿ/ಲೀ), ದ್ರಾವಣ ಎಲೆಗಳ ತಳಭಾಗಕ್ಕೆ ಬೀಳುವಂತೆ ಸಿಂಪಡಿಸುವುದು ಸೂಕ್ತ.

ಕೀಟ ಮತ್ತು ರೋಗಗಳ ನಿರ್ವಹಣೆ:


ಹಣ್ಣು ಕೊರೆಯುವ ಹುಳು, ಸರ್ಪೆಂಟೈನ್ ರಂಗೋಲಿ ಹುಳ, ಕೆಂಪು ಜೇಡ ನುಸಿ ಮತ್ತು ಬಿಳಿ ಚಿಟ್ಟೆಗಳು (ಎಲೆ ಮುರುಟು ರೋಗವನ್ನು ಹರಡುವ ವಾಹಕಗಳು) ಇವು ಟೊಮೆಟೊ ಬೆಳೆ ನಾಶಮಾಡುವ ಕೀಟಗಳು,

IPM - ಸಸಿಮಡಿ (ನರ್ಸರಿ) ನಿರ್ವಹಣೆ:

* ಟೊಮೆಟೊ ಸಸಿಮಡಿಯನ್ನು ಸಿದ್ಧಪಡಿಸುವ 15 ರಿಂದ 20 ದಿನಗಳ ಮು ಬೆಳೆಯಬೇಕು. ಚೆಂಡು ಹೂ ಬೆಳೆಯನ್ನು


* ಟೊಮೆಟೊ ಬೀಜಗಳು ಮೊಳಕೆಯೊಡೆದ ಒಂದು ವಾರದ ನಂತರ ಸಸಿಗಳ ಮೇಲೆ ಇಮಿಡಾಕ್ಲೋಪ್ರಿಡ್ 200 (ಎಸ್‌ಎಲ್‌) ಒಂದು ಲೀಟರ್ ನೀರಿಗೆ 0.3 ಮಿ.ಲಿಯಂತೆ ಅಥವಾ ಥಯೋಮೆಥಾಕ್ಸಾಮ್ 25 ಡುಪಿ ಒಂದು ಲೀಟರ್ ನೀರಿನಲ್ಲಿ 1.3 ಗ್ರಾಂ ನಂತೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು.

IPM - ನಾಟಿ ಮಾಡುವಾಗ:

* ಭೂಮಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಸಾಲುಗಳಲ್ಲಿ ಪ್ರತಿ ಹೆಕ್ಟೇರಿಗೆ 250 ಕೆ.ಜಿ. ಬೇವಿನ  ಹಿಂಡಿಯನ್ನು ಹಾಕಬೇಕು.

* ಸಸಿಗಳ ಬೇರುಗಳನ್ನು ದ್ರಾವಣದಲ್ಲಿ ಅದ್ದಬೇಕು (ಎಲೆಗಳನ್ನು ಅದ್ದಬಾರದು), ಸಸಿಗಳ ಮೇಲೆ ಇಮಿಡಾಕ್ಲೋಪ್ರಿಡ್ 200 ಎಸ್‌ಎಲ್‌ ಒಂದು ಲೀಟರ್ ನೀರಿನಲ್ಲಿ 0.3 ಮಿ.ಲಿ ಅಥವಾ ಥಯೋಮೆಥಾಕ್ಸಾಮ್ 25 ಡಬ್ಲುಪಿ ಪ್ರತಿ ಲೀಟರ್ ನೀರಿನಲ್ಲಿ 0.3 ಗ್ರಾಂ ನಂತೆ ಮಿಶ್ರಮಾಡಿ ಸಿಂಪಡಣೆ ಮಾಡಬೇಕು.

IPM - ಮುಖ್ಯ ಭೂಮಿಯನ್ನು ಸಿದ್ಧಗೊಳಿಸುವುದು:

20 ರಿಂದ 25 ದಿನಗಳ ಟೊಮೆಟೊ ಸಸಿಗಳು ಮತ್ತು 45 ರಿಂದ 50 ದಿನಗಳ ಹಳೆಯ ಚೆಂಡುಹೂ ಸಸಿಗಳನ್ನು ನಾಟಿ ಮಾಡುವಾಗ ಪ್ರತಿ 16 ಟೊಮೆಟೊ ಸಾಲುಗಳಿಗೆ 1 ಸಾಲು ಆಫ್ರಿಕನ್ ಚೆಂಡು ಹೂ ಸಸಿ ನಾಟಿಮಾಡಬೇಕು.

• ಎಲೆ ಮುರುಟು ರೋಗವನ್ನು ಕೊಂಡೊಯ್ಯುವ ವಾಹಕ (ಬೆಳೆ ಚಿಟ್ಟೆ) ದ ನಿಯಂತ್ರಣಕ್ಕೆ ಸಸಿಗಳನ್ನು ನಾಟಿ
ಮಾಡಿದ 15 ದಿನಗಳ ನಂತರ ಇಮಿಡಾಕ್ಲೋಪ್ರಿಡ್ 200 ಎಸ್ಎಎಲ್ 0.4 ಮಿ.ಲಿ/ಲೀ ಅಥವಾ ಥಯೋಮೆಥಾಕ್ಸಾಮ್ 25 ಡಬ್ಲ್ಯುಪಿ ಅನ್ನು 0.3 ಗ್ರಾಂ/ಲೀ ನಂತೆ ಸಿಂಪಡಣೆ ಮಾಡಬೇಕು.

ಹಣ್ಣು ಕೊರೆಯುವ ಹುಳು ಮತ್ತು ರಂಗೋಲಿ ಹುಳವನ್ನು ನಿಯಂತ್ರಣ ಮಾಡಲು ಗಿಡಗಳನ್ನು ನೆಟ್ಟ 20 ರಿಂದ 25 ದಿನಗಳ ನಂತರ ಸಾಲುಗಳಲ್ಲಿ ಪ್ರತಿ ಹೆಕ್ಟೇರಿಗೆ 250 ಕೆ.ಜಿ ಬೇವಿನ ಹಿಂಡಿಯನ್ನು ಹಾಕಬೇಕು.

ಸಸಿಗಳನ್ನು ನಾಟಿ ಮಾಡಿದ 28, 35 ಮತ್ತು 42 ದಿನಗಳಲ್ಲಿ ಹೆಚ್ ಎಎನ್‌ಪಿಪಿ (25) ಎಲ್ಇ/ಹೆಕ್ಟೇರ್) 1, ಬೆಲ್ಲವನ್ನು ಸಾಯಂಕಾಲದ ವೇಳೆ ಸಿಂಪಡಣೆ ಮಾಡಬೇಕು. ಜೊತೆಗೆ ಕಾಯಿ ಕೊರೆಯುವ ಹುಳುಗಳನ್ನು ನಾಶಪಡಿಸಬೇಕು.

• ಕೆಂಪು ಜೇಡ ನುಸಿ ಕಂಡುಬಂದಾಗ, ಬೇವಿನ ಸೋಪ್ | ಅಥವಾ ಬೇವಿನ ಎಣ್ಣೆ IN ಸಂಶ್ಲೇಷಿತ ಆಕ್ಯಾರಿಸೈಡ್ ಆದ ಡೈಕೋಫಾಲ್ 18.5 ಇಸಿ 1.5 ಮಿ.ಲಿ/ಲೀಟರ್ ಅಥವಾ ವೆಟ್ಟಬಲ್ ಸಲ್ಟರ್ 80 ಡಬ್ಲ್ಯುಪಿ 3 ಗ್ರಾಂ/ಲೀಟರ್ ನಂತೆ ಎಲೆಗಳ ತಳಭಾಗದಲ್ಲಿ ಜೇಡ ಕಂಡುಬಂದಾಗ ಸಿಂಪಡಣೆ ಮಾಡಬೇಕು.

ಹುಳು ಕೊರೆದ ಹಣ್ಣುಗಳನ್ನು ಯಾಂತ್ರಿಕವಾಗಿ ಸಂಗ್ರಹಿಸಿ (ಹಣ್ಣು ಬಿಡಲು ಪ್ರಾರಂಭವಾದ ನಂತರ 3 ರಿಂದ 4 ಬಾರಿ) ನಾಶಪಡಿಸುವುದರಿಂದ ಹಣ್ಣು ಕೊರೆಯುವ ಹುಳುಗಳನ್ನು ನಿಯಂತ್ರಿಸಬಹುದು.

ಎಲೆ ಮುರುಟು ರೋಗ ಮತ್ತು ವೈರಸ್ ಪೀಡಿತ ಲಕ್ಷಣಗಳು ಗಿಡಗಳಲ್ಲಿ ಕಂಡುಬಂದಾಗ ಅವುಗಳ ಹರಡುವಿಕೆಯನ್ನು ನಿಯಂತ್ರಿಸಲು ಕೂಡಲೇ ಸೋಂಕಿತ ಗಿಡಗಳನ್ನು ಕಿತ್ತುಹಾಕಬೇಕು.

Created with Mobirise ‌

Free Web Page Creator